Powered By Blogger

ಇಲ್ಲಿ ಕ್ಲಿಕ್ ಮಾಡಿ

Wednesday, October 26, 2011

ಕಾಯುವಿಕೆಯ ಪ್ರಕ್ರಿಯೆ

ನಾನು ಓಡುತ್ತಿದ್ದೇನೆ. ಆಯಾಸವಿಲ್ಲದೆ ವೇಗವಾಗಿ ನಿರಂತರ ನನ್ನನ್ನು ನಾನೇ ಹಿಂದೆ ಹಾಕುತ್ತ ಓಡುತ್ತಿದ್ದೇನೆ. ತನ್ನನ್ನು ತಾನು ಗೆಲ್ಲುವುದೇ ಪ್ರಪಂಚದಲ್ಲಿ ಎಲ್ಲಕ್ಕೂ ದೊಡ್ಡ ವಿಜಯ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಗಮ್ಯದ ಬಳಿ ನಿದ್ರಿಸಿ ಆಮೆಯನ್ನು ಗೆಲ್ಲಿಸಿದ ಮೊಲದ ಕಥೆ ಓದಿದಾಗಿನಿಂದಲೂ ಗಮ್ಯ ಮುಟ್ಟುವುದಕ್ಕೆ ಮುಂಚೆ ನಾನೆಲ್ಲಿಯೂ ವಿಶ್ರಾಂತಿ ಪಡೆಯಲು ಇಷ್ಟಪಡುವುದಿಲ್ಲ. ಒಂದೇ ಗಮ್ಯವನ್ನು ಹಲವಾರು ಉಪಗಮ್ಯಗಳನ್ನಾಗಿಸಿಕೊಂಡು ಒಂದೊಂದನ್ನೂ ಗೆಲ್ಲುತ್ತ ಹೋದಂತೆ ನನ್ನಲ್ಲಿ ಉತ್ಸಾಹ ಹೆಚ್ಚಾಗುತ್ತಾ ಹೋಗುತ್ತದೆ. ನಿರಾಸೆಯಿಂದ ಕೂಡಿದ ಕಂಬನಿಗೂ ಆನಂದ ಭಾಷ್ಪಕ್ಕೂ ದೂರದ ವ್ಯತ್ಯಸವಿಲ್ಲ ಎಂಬುದು ನಾನು ತಿಳಿದುಕೊಂಡಿದ್ದೇನೆ.

ಮುಂಜಾನೆಯ ಕೋಗಿಲೆಯ ‘ಕುಹೂ-ಕುಹೂ', ಗಿಳಿಗಳ ಚಿಲಿಪಿಲಿ, ಗುಬ್ಬಿಗಳ ಇಂಚರಗಳನ್ನು ಕೇಳುವುದು... ಬೆಳದಿಂಗಳಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಕಣ್ಣು ಹೊಡಿಯುವ ಕೋಟಿ ನಕ್ಷತ್ರಗಳ ಹೊಳಪನ್ನು ವೀಕ್ಷಿಸುವುದು…… ದುಂಬಿಗಳ ಜ್ಹೆಂಕಾರದಲ್ಲಿ ಓಂಕಾರದ ನಿನಾದವಿದೆ ಎಂದು ಅರಿಯುವುದು….ಪ್ರಕೃತಿ ಬಿಡಿಸಿಟ್ಟಿರುವ ಅಮೋಘ ಚಿತ್ರವನ್ನು ಜೀವಂತಗೊಳಿಸುವ ಬಣ್ಣ-ಬಣ್ಣದ ಚಿಟ್ಟೆಗಳನ್ನು ನೋಡುವುದು…. ಇವೆಲ್ಲ ಬದುಕಿಗೆ ಸಾಕಷ್ಟು ಆಹ್ಲಾದಕತೆಯನ್ನು ನೀಡುತ್ತವೆ. ಸೂರ್ಯ ರಶ್ಮಿಗೊಸ್ಕರ ಕಾದು ಕುಳಿತಿರುವ ಮುದುಡಿದ ತಾವರೆಗೂ ಕಿರಣಗಳಿಂದ ಸ್ಪರ್ಶಿತವಾಗಿ ಅರಳಿದ ತಾವರೆಗೂ ಇರುವ ಕಾಯುವಿಕೆಯ ಪ್ರಕ್ರಿಯೆಯನ್ನು ಕಂಡು ನಾನು ಬೆರಗಾಗುತ್ತೇನೆ.

No comments:

Post a Comment