
ಜೈ ಕನ್ನಡಾಂಬೆ...!
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ತಾಯಿ ಭುವನೇಶ್ವರಿಯ ಕೃಪಾ ಕಟಾಕ್ಷದಿಂದಾಗಿ ಈ ಜನ್ಮವಂತು ಇಲ್ಲಿಯೇ ಪಡೆದಿದ್ದೇನೆ. ಮತ್ತೆ ಹುಟ್ಟಿ ಬರುವಂತಿದ್ದರೆ ಅದು ಈ ಕನ್ನಡ ತಾಯಿಯ ಮಡಿಲೇ ಆಗಿರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಕರುನಾಡ ತಾಯಿ ಸದಾ ಚಿನ್ಮಯಿ. ಕನ್ನಡ ಭಾಷೆ ನಮ್ಮ ಜೀವನಕ್ಕೆ ಕನ್ನಡಿ ಹಿಡಿದು ತೋರಿಸುವ ಜೀವಂತ ಸಮೃದ್ಧ ಭಾಷೆ. ೮ ಜ್ಞ್ಯಾನ ಪೀಠ ಪ್ರಶಸ್ತಿ ಪಡೆದ ಭಾರತದ ಏಕೈಕ ಭಾಷೆ ನಮ್ಮದು. ನನ್ನ ಒಂದು ಅತಿ ಪ್ರಿಯವಾದ ಹಾಡನ್ನು ಇಲ್ಲಿ ಬರೆಯುತ್ತಿರುವೆ. ಓದಿ....
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಡಾ|| ರಾಜ್‍ಕುಮಾರ್
ರಾಗ: ಮೋಹನ್
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ…… ||೨||
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಆಹಾ…
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಕವಿ ನುಡಿ ಕೋಗಿಲೆ ಹಾಡಿದ ಹಾಗೆ
ಸವಿ ನುಡಿ ತಣ್ಣನೆ ಗಾಳಿಯ ಹಾಗೆ…… ||೨||
ಒಲವಿನ ಮಾತುಗಳಾಡುತಲಿರಲು
ಮಲ್ಲಿಗೆ ಹೂಗಳು ಅರಳಿದ ಹಾಗೆ
ಮಕ್ಕಳು ನುಡಿದರೆ ಸಕ್ಕರೆಯಂತೆ
ಅಕ್ಕರೆ ನುಡಿಗಳು ಮುತ್ತುಗಳಂತೆ
ಪ್ರೀತಿಯ ನೀತಿಯ ಮಾತುಗಳೆಲ್ಲ
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಹ ಹಾ ಹ ಹ ಹ!! ಅಹ ಅಹಾ
ಅಹ ಅಹಾ!! ಹ ಹಾ ಹ ಹ ಹ!!
ಕುಮಾರವ್ಯಾಸನ ಕಾವ್ಯದ ಚೆಂದ
ಕವಿ ಸರ್ವಘ್ನನ ಪದಗಳ ಅಂದ ||೨||
ದಾಸರು ಶರಣರು ನಾಡಿಗೆ ನೀಡಿದ
ಭಕ್ತಿಯ ಗೀತೆಗಳ ಪರಮಾನಂದ
ರನ್ನನು ರಚಿಸಿದ ಹೊನ್ನಿನ ನುಡಿಯು
ಪಂಪನು ಹಾಡಿದ ಚಿನ್ನದ ನುಡಿಯು
ಕನ್ನಡ ತಾಯಿಯು ನೀಡಿದ ವರವು
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ವಾಣಿಯ ವೀಣೆಯ ಸ್ವರಮಧುರ್ಯವೋ
ಸುಮಧುರ ಸುಂದರ ನುಡಿಯೊ
ಜೇನಿನ ಹೊಳೆಯೊ ಹಾಲಿನ ಮಳೆಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಸುಧೆಯೊ ಕನ್ನಡ ಸವಿ ನುಡಿಯೊ
ಹೇಳಬೇಕೆಂದುಕೊಂಡದ್ದೆಲ್ಲ ಚಿ. ಉದಯಶಂಕರ್ ಅವರು ಅದಾಗಲೇ ಹೇಳಿ ಬಿಟ್ಟಿದ್ದಾರಲ್ಲ. ಇದಕ್ಕಿಂತಲೂ ಹೆಚ್ಚಿಗೆ ನಾನು ಇನ್ನೇನು ತಾನೇ ಹೇಳಲಿ ?
No comments:
Post a Comment