Powered By Blogger

ಇಲ್ಲಿ ಕ್ಲಿಕ್ ಮಾಡಿ

Wednesday, October 26, 2011

ಕಾಯುವಿಕೆಯ ಪ್ರಕ್ರಿಯೆ

ನಾನು ಓಡುತ್ತಿದ್ದೇನೆ. ಆಯಾಸವಿಲ್ಲದೆ ವೇಗವಾಗಿ ನಿರಂತರ ನನ್ನನ್ನು ನಾನೇ ಹಿಂದೆ ಹಾಕುತ್ತ ಓಡುತ್ತಿದ್ದೇನೆ. ತನ್ನನ್ನು ತಾನು ಗೆಲ್ಲುವುದೇ ಪ್ರಪಂಚದಲ್ಲಿ ಎಲ್ಲಕ್ಕೂ ದೊಡ್ಡ ವಿಜಯ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಗಮ್ಯದ ಬಳಿ ನಿದ್ರಿಸಿ ಆಮೆಯನ್ನು ಗೆಲ್ಲಿಸಿದ ಮೊಲದ ಕಥೆ ಓದಿದಾಗಿನಿಂದಲೂ ಗಮ್ಯ ಮುಟ್ಟುವುದಕ್ಕೆ ಮುಂಚೆ ನಾನೆಲ್ಲಿಯೂ ವಿಶ್ರಾಂತಿ ಪಡೆಯಲು ಇಷ್ಟಪಡುವುದಿಲ್ಲ. ಒಂದೇ ಗಮ್ಯವನ್ನು ಹಲವಾರು ಉಪಗಮ್ಯಗಳನ್ನಾಗಿಸಿಕೊಂಡು ಒಂದೊಂದನ್ನೂ ಗೆಲ್ಲುತ್ತ ಹೋದಂತೆ ನನ್ನಲ್ಲಿ ಉತ್ಸಾಹ ಹೆಚ್ಚಾಗುತ್ತಾ ಹೋಗುತ್ತದೆ. ನಿರಾಸೆಯಿಂದ ಕೂಡಿದ ಕಂಬನಿಗೂ ಆನಂದ ಭಾಷ್ಪಕ್ಕೂ ದೂರದ ವ್ಯತ್ಯಸವಿಲ್ಲ ಎಂಬುದು ನಾನು ತಿಳಿದುಕೊಂಡಿದ್ದೇನೆ.

ಮುಂಜಾನೆಯ ಕೋಗಿಲೆಯ ‘ಕುಹೂ-ಕುಹೂ', ಗಿಳಿಗಳ ಚಿಲಿಪಿಲಿ, ಗುಬ್ಬಿಗಳ ಇಂಚರಗಳನ್ನು ಕೇಳುವುದು... ಬೆಳದಿಂಗಳಲ್ಲಿ ಮನೆಯ ಮಾಳಿಗೆಯ ಮೇಲೆ ಕುಳಿತು ಕಣ್ಣು ಹೊಡಿಯುವ ಕೋಟಿ ನಕ್ಷತ್ರಗಳ ಹೊಳಪನ್ನು ವೀಕ್ಷಿಸುವುದು…… ದುಂಬಿಗಳ ಜ್ಹೆಂಕಾರದಲ್ಲಿ ಓಂಕಾರದ ನಿನಾದವಿದೆ ಎಂದು ಅರಿಯುವುದು….ಪ್ರಕೃತಿ ಬಿಡಿಸಿಟ್ಟಿರುವ ಅಮೋಘ ಚಿತ್ರವನ್ನು ಜೀವಂತಗೊಳಿಸುವ ಬಣ್ಣ-ಬಣ್ಣದ ಚಿಟ್ಟೆಗಳನ್ನು ನೋಡುವುದು…. ಇವೆಲ್ಲ ಬದುಕಿಗೆ ಸಾಕಷ್ಟು ಆಹ್ಲಾದಕತೆಯನ್ನು ನೀಡುತ್ತವೆ. ಸೂರ್ಯ ರಶ್ಮಿಗೊಸ್ಕರ ಕಾದು ಕುಳಿತಿರುವ ಮುದುಡಿದ ತಾವರೆಗೂ ಕಿರಣಗಳಿಂದ ಸ್ಪರ್ಶಿತವಾಗಿ ಅರಳಿದ ತಾವರೆಗೂ ಇರುವ ಕಾಯುವಿಕೆಯ ಪ್ರಕ್ರಿಯೆಯನ್ನು ಕಂಡು ನಾನು ಬೆರಗಾಗುತ್ತೇನೆ.

Good Morning...!

ದೂರ ದಿಗಂತದಲ್ಲಿ ಸೂರ್ಯ ನಿಧಾನವಾಗಿ ವಸುಧೆಯ ಕೆನ್ನೆಗೆ ಚುಂಬನದ ಮಳೆಗರೆಯುತ್ತ ಮೇಲೆಳುತ್ತಿದ್ದಾನೆ. ಇದನ್ನು ಕಂಡು ಸಂಭ್ರಮಿಸುತ್ತಿರುವಂತೆ ಹಕ್ಕಿಗಳು ತಮ್ಮ ಗೂಡಿನಿಂದ ಹೊರಬಂದು ಚಿಲಿಪಿಲಿಯ ಇಂಚರದೊಂದಿಗೆ ಹಾರಾಡುತ್ತಿವೆ. ಗಿಡ-ಮರಗಳು ಮಂಜು ಕವಿದಿರುವ ವಾತಾವರಣದಲ್ಲಿ ಆಹ್ಲಾದಕತೆಯ ಪ್ರತೀಕದಂತೆ ತೋರುತ್ತಿವೆ. ಇದಕ್ಕಿಂತಲೂ ಶುಭಾದಿನದಾರಂಭ ಇನ್ನಾವ ರೀತಿಯಿಂದ ತಾನೇ ಆಗಲು ಸಾಧ್ಯ ?

ಜೀವನಪೂರ್ತಿ ಪ್ರತಿದಿನದಾರಂಭವೂ ರೀತಿಯೇ ಆದರೆ ಅದೆಷ್ಟು ಚೆನ್ನ ಎನ್ನಿಸುತ್ತಿದೆ.

Tuesday, October 25, 2011

ನನ್ನ ಪ್ರಪಂಚ

ಮರೆತು ಹೋದ ಮಧುರ ಸ್ಮೃತಿಗಳಿಗಿಂತಲೂ ನೆನಪಿನಂಗಳದಲ್ಲಿ ಗಿಡವಾಗಿ ಬೆಳೆದು ಗುಲಾಬಿ ಹೂವಿನ ಪರಿಮಳ ಬೀರುವ ಸ್ಮೃತಿಗಳು ನನ್ನನ್ನು ಹೆಚ್ಚು ಪುಳಕಿತವಾಗಿಸುತ್ತವೆ. ಪ್ರೇರಕ ಕಾರಣದಿಂದಾಗಿ ಇಲ್ಲಿ ನಾನು ನನ್ನ ಮಧುರ ಅನುಭೂತಿಗಳನ್ನು, ಭಾವನೆಗಳನ್ನು, ಯೋಚನೆಗಳನ್ನು, ವಿಚಾರಗಳನ್ನು, ಕನಸುಗಳನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತೇನೆ. ಇದಕ್ಕೆ ದಿನಚರಿಯಂತೆ ಸಮಯದ ಪರಿಮಿತಿ ಇರುವುದಿಲ್ಲ. ಯಾವಾಗ ನನಗೆ ಮಾನಸಿಕ ಅಥವಾ ಭೌತಿಕ ಘಟನೆ ವಿಶೇಷವಾಗಿ ತೋರುವುದೋ ಆಗೆಲ್ಲ ಇಲ್ಲಿ ಬರೆಯಲು ತವಕಿಸುತ್ತೇನೆ. ಇಲ್ಲಿ ನಾನು ದಿನಾಂಕಕ್ಕೆ ಯಾವುದೇ ಮಹತ್ವ ಕೊಡುವುದಿಲ್ಲ. ಆದರೂ ದಿನವೂ ಇದನ್ನು ಬರೆಯಲು ಪ್ರಯತ್ನಿಸುತ್ತೇನೆ. ಬೇಕೆನಿಸಿದಾಗ ಬರೆಯುವ ಸ್ವತಂತ್ರ ಕೂಡ ಇರುತ್ತದೆ.

ನನ್ನ ಬ್ಲಾಗ್ ಎಷ್ಟು ಜನ ಓದುತ್ತಾರೋ ಯಾರಿಗೆ ಗೊತ್ತು? ನಾನು ಬೇರೆಯವರಿಗೋಸ್ಕರ ಬ್ಲಾಗ್ create ಮಾಡಿಲ್ಲ. ನಾನು ಮತ್ತು ನನ್ನ ನೆನಪುಗಳಿಗೊಸ್ಕರ ಇಲ್ಲಿ ಬರೆದುಕೊಳ್ಳುತ್ತಿರುವೆ. ಅದನ್ನು ಕಂಪ್ಯೂಟರ್ನಲ್ಲಿಯೇ ಸೇವ್ ಮಾಡಿ ಇಡಬಹುದಿತ್ತು, ಇಲ್ಲಿ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ, ಎಲ್ಲೆಂದರಲ್ಲಿ ನನ್ನ ಡೆಸ್ಕ್ ಟಾಪ್ ಎತ್ತಿಕೊಂಡು ಹೋಗುವ ಹಾಗೆ ಇಲ್ಲವಲ್ಲ. ಅದಕ್ಕಾಗಿಯೇ ಬ್ಲಾಗನಲ್ಲಿ ಬರೆದಿದುತ್ತಿರುವೆ. ಹಾಗಂತ ಬ್ಲಾಗ್ ಪೂರ್ತಿ ಪರ್ಸನಲ್ ಕೂಡ ಅಲ್ಲ. ಯಾರು ಬೇಕಾದರೂ ಓದಬಹುದು ಹಾಗೂ ತಮ್ಮ ಕಾಮೆಂಟ್ ಟೈಪ್ ಮಾಡಬಹುದು. ಅದಕ್ಕಾಗಿಯೇ ಹೇಳ್ತಾ ಇರುವೆ, ಎಲ್ಲರಿಗೂ ನನ್ನ ಪ್ರಪಂಚಕ್ಕೆ ಸ್ವಾಗತ, ಸುಸ್ವಾಗತ.

ಇಲ್ಲಿ ಗೂಗಲ್ ಗೆ ಒಂದು ಥ್ಯಾಂಕ್ಸ್ ಹೇಳಬೇಕಾಗುತ್ತೆ. ಅದಿಲ್ಲದಿದ್ದಿದ್ದರೆ ನಾನು ಈ ಬ್ಲಾಗ್ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಸೊ, thank you Google.

ಅದೇನೇ ಇರಲಿ, ಸದ್ದ್ಯಕ್ಕೆ ಇಷ್ಟು ಸಾಕು ಅನ್ನಿಸುತ್ತೆ. ಮತ್ತೆ ಸಿಗುತ್ತೇನೆ. Goodbye....!


Man proposes but God disposes

I thought that I am going to write in this blog about me and about my life. But unfortunately I was busy in some other works and didn't got the time. May be that is why there is a saying in English, "Man proposes but God disposes". It means, people can make plans; God determines how things will turn out. Some times we make a plan and leave no stone unturned to achieve it, even though our well calculated plan fails at the last moment.


Whatever, now I am determine to write in this blog at least a single line every day. I hope that this time I will not fail.

This is the month of festivals in India. We have already celebrated the Dasahara. Now, we are celebrating the Deepavali.

When I was a small child I used to wait these festivals with eagerness. Because, Dasahara was such kind of a festival that we got one month's school holiday in this very month every year. And Deepavali gave us opportunity to burn fire crackers. But, now I am not feeling that type of eagerness anymore.



Ans to the cool puzzle is:- 3





The man had to reply the number of characters (alphabets) in the word the Doorman was asking.

He should have replied "Three" instead of "Five". Because there are three
alphabets in the TEN.







I bet you'll read the question again...